Sunday, 23 October 2016

Sydney Times!

ಜೀವನದಲ್ಲಿ ತಿರುವುಗಳು ಸಹಜ ಅಂತಾರೆ. ನನ್ನ life ಅಲ್ಲಿ ಬಂದ ತಿರುವುಗಳು ತುಂಬಾ ಅನಿರೀಕ್ಷಿತವಾದಂತವು. ಒಂದು different experience, independent ಆಗಿ life lead ಮಾಡೋಕೆ ಸಾಧ್ಯ ಆದದ್ದು ಚಿಕ್ಕ ತಿರುವುಗಳಿಂದಾನೆ.

ಏನ್ ಹೇಳ್ತಿದಾಳೆ ಹುಡುಗಿ ಅಂದ್ಕೊಂಡ್ರಾ! ಹ್ಹ ಹ್ಹ… Yes ನನ್ನ ಜೀವನದಲ್ಲಿ ಅನಿರೀಕ್ಷಿತವಾಗಿ ಬಂದ ತಿರುವು ನನ್ನ ಕೊಂಡೊಯ್ದದ್ದು Sydneyಗೆ. ಇಂದು blog ಮೂಲಕ ನಾ ಹೇಳಹೊರಟಿರೋದು ನನ್ನ Sydney Storey ಬಗ್ಗೆ

 ಎಂದೂ ಹೊರದೇಶಕ್ಕೆ ಹೋದ ಹುಡುಗಿ ನಾನಲ್ಲ. ನಿಜ ಹೇಳ್ಬೇಕಂದ್ರೆ ನಂಗೆ ತರದ ಕನಸೂ ಕೂಡ ಇರ್ಲಿಲ್ಲ. ಇದೊಂತರ ಬಯಸದೆ ಬಂದಭಾಗ್ಯ! ಇನ್ನು Sydneyಗೆ ಹೊರಟ ದಿನ ನನ್ನಲ್ಲಿ ಆದ ತಳಮಳ, ನಾ ಎಲ್ಲವನ್ನೂ ಒಬ್ಬಳೆ ನಿಭಾಯಿಸ್ತೀನಾ ಅಂತ ನನಗೇ ನಾ ಕೇಳಿಕೊಂಡ ಪ್ರಶ್ನೆ, ಗೊಂದಲ, ಭಯ! ಎಲ್ಲವೂ ಈಗ ಬರಿಯ ನೆನಪು. ಕಣ್ಣು ಮುಂದೆ ಹಾದು ಹೋಗೋ ನೆನಪುಗಳನ್ನ ಮೆಲುಕುಹಾಕೋದೆ ಒಂದು ಚೆಂದ.

ಬಾರಿ ನನ್ನ ಕನಸಿನೂರು Sydney ಆಗಿತ್ತು. Sydneyಯಲ್ಲಿ ನನ್ನದೊಂತರ ಏಕಾಂಗಿ ಪಯಣ. ಪಯಣದಲ್ಲಿ ನಾ ಇಟ್ಟ ಪ್ರತಿ ಹೆಜ್ಜೆ ನನ್ನಲ್ಲಿ confidence ತುಂಬಿದೆ. ಏಕಾಂಗಿಯಾಗಿ ಪ್ರಕೃತಿಯನ್ನ ನೋಡ್ತಾ enjoy ಮಾಡೋದ್ರಲ್ಲಿ ಇರೋ ಮಜಾನೆ ಬೇರೆ.

Sydney ಕೊಂಚ ಕೊಂಚ ಪರಿಚಯ ಆಗ್ತಾ ಇದ್ದ ಸಮಯ. ಹೀಗೆ ಒಂದು Sunday ಮಳೆ ಬೇರೆ ಹನಿತಿತ್ತು. ನಂಗೆ ಸಹ ಮನೆಯಲ್ಲೇ ಇದ್ದು ಬೇಜಾರು. ನಾನು ನನ್ನ ಚಿಕ್ಕ ಕೊಡೆ ಹಾಗು ನನ್ನ ಬ್ಯಾಗ್, ಮೂವರು ಹೊರಗೆ ಬಿದ್ವಿ. ಇಲ್ಲಿ roads ಮೇಲೆ ನಡೆಯೋದೆ ಒಂದು ಚೆಂದ. ನಮ್ಮ apartment opposite Hyde park ಇತ್ತು. ಇದು ಕೂಡ Sydneyಯಲ್ಲಿ ಒಂದು famous park. ಅಲ್ಲೊಂದು ಇಲ್ಲೊಂದು ಮಳೆ ಹನಿ ಬೀಳ್ತಾ ಇತ್ತು. It was an awesome feeling! ತಣ್ಣನೆ ಗಾಳಿ, ತುಂಬಾ ಚಳಿ ಮಾತ್ರ ಇಲ್ಲಿ. ನಡುಗೊ ಅಷ್ಟು ಚಳಿ. ಅಬ್ಬಬ್ಬಾ! ಆದ್ರೆ ಅದು ಒಂತರ ಮಜ ಇರುತ್ತೆ. ಹ್ಹ ಹ್ಹ!! Hyde park ಸುತ್ತ ಮುತ್ತ Sydney Tower, Archibald fountain ಇವೆ. ಅವನ್ನೆಲ್ಲ ನೋಡಿ ನಾ ಹೊರಟದ್ದು Sydney Royal Botanical Garden ಕಡೆಗೆ.

But ಅಲ್ಲಿ ಹೋಗೋ ಮುಂಚೆ ನಂಗೆ ಸಿಕ್ಕದ್ದು Art Gallery of New South Wales. ನಂಗೆ art, paintings ಅಂದ್ರೆ ತುಂಬಾ ಇಷ್ಟ. ಇಲ್ಲಿ ಯಾವುದೇ entrance fee ಇರ್ಲಿಲ್ಲ. ಇಲ್ಲಿ ಅಂತ್ರೂ ಕಣ್ಣಿಗೆ ಹಬ್ಬ. Awesome paintings! 1800s ಮಾಡಿರೋ paintings ಎಲ್ಲ ಇಲ್ಲಿವೆ. Nicholas Chevalier, Lucien Henry, John Skinner Prout, W C Piguenit, Eugene von Guerard etc., ಇವರ paintings ಎಲ್ಲಾ ಇವೆ. ಅಷ್ಟು ನೈಜವಾಗಿ ಪ್ರಕೃತಿಯನ್ನ ತಮ್ಮ ಕುಂಚದಿಂದ ಹೇಗೆ ಬಿಡಿಸೋಕಾದ್ರು ಸಾಧ್ಯ ಅಂತ ಅನ್ನಿಸೋದು ಮಾತ್ರ ಖಂಡಿತ!
 
Art Gallery of New South Wales

Art Gallery ನೋಡಿ ಅಲ್ಲೇ ಹತ್ತಿರ ಇದ್ದ cafeಯಲ್ಲಿ chocolate milkshake ತಗೊಂಡು ಹೊರಟದ್ದು Royal Botanical Garden ಕಡೆಗೆ. ಎಷ್ಟೇ ಚಳಿ ಇದ್ರೂ ನಾ ಮಾತ್ರ everyday ಒಂದು cold chocolate milkshake ಕುಡಿಯೋದು ಮಾತ್ರ miss ಮಾಡ್ತಿರ್ಲಿಲ್ಲ. ಹ್ಹ ಹ್ಹ!!

@ Royal Botanical Garden, Sydney
Garden ಇಂದ ನಡಿತಾ ಹೋದಂತೆ harbourಗೆ connect ಆಗುತ್ತೆ. Wow! ಸಂಜೆ ಹೊತ್ತಲ್ಲಿ ಇಲ್ಲಿ ನಡಿತಾ ಹೋಗೋದೆ ಒಂದು ಚೆಂದ. ಇಲ್ಲಿಂದ Harbour Bridge ಹಾಗು Opera House ಕಾಣುತ್ತೆ. ನಾವು ಒಬ್ಬರೆ ಇದ್ರೂ ಸಹ ಪ್ರಕೃತಿ ಮಧ್ಯೆ ಇರುವಾಗ ನಮಗೆ ಒಂಟಿತನ ಕಾಡೋದೆ ಇಲ್ಲ. ಹಾಗೆ ನಡಿತಾ ಹೋದಂತೆ Mrs Macquarie’s Chair ಸಿಗುತ್ತೆ. ಇಲ್ಲಿ ಕುಳಿತು ಅವರು harbour view ನೋಡ್ತಿದ್ರು ಅಂತ ತಿಳಿತು. ಇಲ್ಲಿಂದ view ನೋಡೋದೆ ಒಂದು ಚೆಂದ. ನಾ ತೆಗೆದಂತ ಕೆಲವು picsಗಳನ್ನ share ಮಾಡ್ತಿದೀನಿ.ಇಲ್ಲಿ sunset ತುಂಬಾ ಬೇಗ ಆಗುತ್ತೆ. 5.00 PM ಅಷ್ಟ್ರಲ್ಲಿ sunset ಆಗಿಬಿಡುತ್ತೆ. Sunset ನೋಡ್ತ ನಾ ಮನೆ ದಾರಿ ಹಿಡಿದೆ.

A view from Royal Botanical Garden
ಮತ್ತೆ next weekendಗೆ ಕಾಯ್ತಾ work ಶುರು ಆಗೋದು.Friday ಬಂದಾಗ ಏನೋ ಖುಷಿ. Saturday ಬೇಗ ಬರಲಿ ಅನ್ನೋ ಮನಸು. ಯಾಕೆ ಅಂದ್ರೆ ಸರಿ ಹುಡುಗಿ ಕಾಯ್ತ ಇದ್ದದ್ದು Manly Beachಗೆ ಹೋಗೋಕೆ. ಅವತ್ತು saturday ಬೆಳಿಗ್ಗೆ 6 ಗಂಟೆಗೆ alarm ಇಟ್ಟು, alarm ಹೊಡೆದಾದಮೇಲೂ ಮತ್ತೊಂದು round ನಿದ್ದೆ ಮಾಡಿ ಎದ್ದು ಬೇಗ ಬೇಗ ready ಆಗಿ, ತಿಂಡಿ ಮಾಡ್ಕೊಂದು ತಿಂದು, ಅಮ್ಮನೊಡನೆ ಮಾತಾಡಿ ಮನೆಯಿಂದ ಹೊರಟೆ. ದಾರೀಲಿ ಹೋಗ್ತಾ ನಾ ಯಾವಾಗ್ಲೂ ಹೋಗ್ತಿದ್ದ cafeಗೆ ಹೋದೆ. ನಾ ಏನು order ಮಾಡ್ತೀನಿ ಅಂತ ಅವ್ರಿಗೆ ಮುಂಚೇನೆ ಗೊತ್ತಿರೋದು. ಹ್ಹ ಹ್ಹ!!! ನಾ ಹೇಳೋಕು ಮುಂಚೆ ಅವರೆ ಹೇಳಿಬಿಡೋರು chocolate milkshake ಅಂತ. ಹ್ಹ ಹ್ಹ!!!

On the way to Manly(Ferry ride)
ನನ್ನ favourite chocolate milkshake ಕುಡಿತಾ George Street ಕಡೆಗೆ ಹೊರಟೆ. ಸ್ವಲ್ಪ ದೂರ ನಡಿತಾ ಹೋದ್ರೆ ಸಿಗೋದೆ Circular Quay. ಇಲ್ಲಿ ferry service ಇದೆ. ನನಗೆ ಇದೊಂತರ first experience. ಮುಂಚೆ ಎಂದೂ ferryಯಲ್ಲಿ ಹೋದದ್ದಿಲ್ಲ. Hey, ನಾ ಹೇಳೋದೆ ಮರೆತು ಹೋದೆ. ಇಲ್ಲಿ road ಅಲ್ಲಿ ಹೋಗೋವಾಗ ಕೆಲವೊಮ್ಮೆ ಇಂಪಾದ ಸಂಗೀತ ಕೇಳ್ಸೋದು. ಹೇಗೆ ಅಂತೀರ? ಇಲ್ಲಿ road ಅಲ್ಲಿ singers guitar ಹಿಡಿದು ಹಾಡ್ತಾ ಇದ್ರೆ ಕೇಳೋಕೆ ಚೆಂದ. ಕೆಲವರು 3D drawings ಕೂಡ ಮಾಡ್ತಾರೆ. ಇದೆಲ್ಲ ಒಂದು different experience. ಮಸ್ತ್ ಇತ್ತು.

Ferry ಹತ್ತಿ ನಾ ಹೊರಟದ್ದು Manlyಗೆ. Wow! ferry ride was superb! Awesome!! ಇಲ್ಲಿ ಹೋಗೋವಾಗ Harbour Bridge view super ಆಗಿ ಕಾಣುತ್ತೆ.Manly wharf ಇಂದ beach around a kilometre ಅನ್ಸುತ್ತೆ.ನಡಿತಾ ಹೊರಟಾಗ ನಾ ಕಂಡದ್ದು some music show ಮತ್ತು varieties of food and drinks. ಅದೆಲ್ಲ ನೋಡ್ತ ಜನರ ಮಧ್ಯೆ ಜಾಗ ಮಾಡ್ಕೊಂದು beach ಕಡೆ ಹೆಜ್ಜೆ ಹಾಕ್ದೆ.


Actually ನಾ ಚಿಕ್ಕ ವಯಸ್ಸಲ್ಲಿ ಎಂದೊ ಒಂದು ದಿನ ಮುರುಡೇಶ್ವರ beach ನೋಡಿದ್ದೆ ಹೊರತು ಅದಾದಮೇಲೆ ಎಂದೂ beach ನೋಡಿದ್ದೇ ಇಲ್ಲ. ನನಗೆ beach ನೋಡಿದಾಗ ಏನೋ ಖುಷಿ. ಕುಣಿಬೇಕು ಅನ್ನಿಸ್ತಿತ್ತು. ಹ್ಹ ಹ್ಹ! ನಾ ಒಬ್ಬಳೇ ಇದ್ರೂ ಒಂಟಿ ಅನ್ನಿಸ್ಲೇ ಇಲ್ಲ. ನನಗೆ ಅರಿವಿಲ್ದೇ ಅಲೆಗಳು ಬರುವಾಗ ಅವುಗಳೊಡನೆ ಆಟ ಆಡೋಕೆ ಶುರು ಮಾಡಿದ್ದೆ. ಅಲ್ಲಿ ಕೆಲವಷ್ಟು pics, selfies ತೆಗೆದು beach ಇನ್ನೊಂದು ಕಡೆ ಹೋಗೋಣ ಅಂತ ಹೊರಟೆ. ಅಲ್ಲಿ ಬಂಡೆ ಮೇಲೆ ತುಂಬಾ ಹೊತ್ತು ಕುಳಿತಿದ್ದೆ. ಅಲೆಗಳು ಬಂದು ಅಪ್ಪಳಿಸೋದನ್ನ ನೋಡೋದೆಒಂದು ಚೆಂದ. ಏನೋ ಖುಷಿ. Sydney Manly Beach ಬಂಡೆ ಮೇಲೆ ಕುಳಿತು ನಮ್ಮ ಕನ್ನಡ ಹಾಡು ಕೇಳ್ತಾ ಇದ್ದೆ. ಹ್ಹ ಹ್ಹ!!! ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೋಲೆ ಅಂತ ಹಾಡು play ಆಗ್ತಾ ಇತ್ತು.
Manly Beach
ಇಲ್ಲಿ beach ಪಕ್ಕ walk ಮಾಡ್ಲಿಕ್ಕೆ ಅಂತಾನೆ ಅನುಕೂಲ ಮಾಡಿದಾರೆ. Coastal walk ತರ. ನನಗೆ ದೂರದಲ್ಲಿ ಇನ್ನೊಂದು beach ಕಾಣಿಸ್ತಾ ಇತ್ತು. ನನಗೆ ಅದ್ಯಾವ್ದು ಅಂತ ಗೊತ್ತಿರ್ಲಿಲ್ಲ. ನೋಡೋಣ ಹೋಗಿ ಅಂತ ಹೊರಟೆ. ಅದು Shelly beach. It's an awesome place! Super ಇದೆ. ನಾ ಇಲ್ಲಿ ಒಬ್ಳೆ ಎಷ್ಟು enjoy ಮಾಡಿದೀನಿ ಅಂದ್ರೆ ಒಳ್ಳೆ ಚಿಕ್ಕ ಹುಡುಗಿ ತರ. ಹ್ಹ ಹ್ಹ!


Shelly Beach
ಅಲ್ಲಿ ಕೆಲವು steps ಇದ್ವು. ಏನೋ ಮೇಲೆ ಹತ್ತಿ ಹೋಗೋಕೆ ಇದೆಯಲ್ಲ ಅಂತ ಹತ್ತಿ ನೋಡ್ದೆ. Wow! What an amazing view!! ನನಗೆ ಈಗ್ಲೂ ಕಣ್ಣು ಮುಚ್ಚಿ ನೆನೆಸ್ಕೊಂಡ್ರೆ ಚಿತ್ರ ಕಣ್ಣೆದುರಿಗೆ ಬರುತ್ತೆ. ಎಲ್ಲೆಲ್ಲೂ ನೀಲಿ ನೀರು, ನೀಲಿ ಆಕಾಶ! ಕಣ್ಣು ಹಾಯಿಸಿದಷ್ಟು ದೂರ ನೀಲಿ. ಅಬ್ಬ! I am really lucky ಅನ್ಸುತ್ತೆ. ದಾರಿ ಹಿಡಿದು ಹಾಗೆ ಕೆಳಗೆ ಇಳಿದ್ರೆ beach ಹತ್ತಿರ ಹೋಗಬಹುದು. ನಾ ಒಬ್ಳೆ ಚಿಕ್ಕ ಹುಡುಗಿ ತರ ಬಣ್ಣ ಬಣ್ಣದ ಕಲ್ಲು, ಕಪ್ಪೆ ಚಿಪ್ಪು ಆರಿಸಿಕೊಳ್ತಾ ಇದ್ದೆ. ನನ್ನನೋಡಿ ಇನ್ನೊಂದಿಬ್ರು ಆರಿಸೋಕೆ ಶುರು ಮಾಡಿದ್ರು. ಹ್ಹ ಹ್ಹ! ಏನೆ ಅನ್ನಿ  ಪ್ರಕೃತಿಯೆನ್ನೊ ಅಮ್ಮನೆದುರು ನಾವೆಲ್ಲ ಚಿಕ್ಕ ಮಕ್ಕಳೆ ಅಲ್ವಾ.

Shelly Beach
ಮಗುವಿನಂತಾ ಮನಸ್ಸು ನಮ್ಮಲ್ಲಿದ್ರೆ ಖುಷಿ ತನ್ನಿಂದತಾನೆ ಹುಟ್ಟುತ್ತೆ.Trust me! ಇದು ನಿಜ. ಮತ್ತೆ ಮೇಲೆ ಹತ್ತಿ ಹೋದೆ. viewpoint ಹತ್ತಿರ ಒಬ್ಬ ಅಜ್ಜ ಅಜ್ಜಿ ಕುಳ್ತಿದ್ರು. sunset ನೋಡ್ತಾ. ಎಷ್ಟು cute couple ಅನ್ಸ್ತು. ಅದಕ್ಕೆ ಸರಿಯಾಗಿ ಎರಡು cute heart (pic ಅಲ್ಲಿ ಇರುವ) ಕೂಡ ಕಂಡದ್ದು ಖುಷಿಯಾಯ್ತು.  Sunset ನೋಡ್ತಾ ಖುಷಿಯಿಂದ Manly wharf ಕಡೆ ಹೆಜ್ಜೆ ಹಾಕ್ದೆ. ತುಂಬಾ ಚಳಿ ಇತ್ತು. ಇಲ್ಲಿಯಂತ್ರೂ ಕೊರೆಯೋ ಚಳಿ. But still ferry ಒಳಗೆ ಕೂರೋಕಿಂತ ಹೊರಗೆ ಕೂರೋದೆ ಮಜ. ತಂಡಿ ಗಾಳಿ ಅಬ್ಬ! ಮಜ ಇತ್ತು. Circular Quayಗೆ ಬರುವಾಗ Opera house ಹಾಗು Harbour bridge ಕಾಣಿಸುತ್ತೆ.
Sunset @ Shelly Beach

Two cute hearts
June time ಅಲ್ಲಿ ಒಂದು festival celebrate ಮಾಡ್ತಾರೆ. Festival of lights ಅಂತಾನೆ ಹೇಳ್ಬೋದು. Vivid ಅಂತಾರೆ ಇಲ್ಲಿ. ಹತ್ತತ್ರ ಒಂದು ತಿಂಗಳು ಇರುತ್ತೆ. time ಅಲ್ಲಿ Opera House, Harbour bridge, Botanical garden ಹೀಗೆ ಬೇರೆ ಬೇರೆ ಕಡೆ ಎಲ್ಲ ಸಂಜೆ ಆದ ನಂತರ buildings  ಮೇಲೆಲ್ಲ lights project ಮಾಡ್ತಾರೆ. ನೋಡ್ಲಿಕ್ಕೆ ತುಂಬಾನೆ colourful ಆಗಿರುತ್ತೆ. ಕೆಲವು pics share ಮಾಡ್ತಿದೀನಿ.

Opera House during Vivid Sydney Celebrations
Vivid Sydney celebrations ನೋಡಿ ಮನೆಗೋಗಿ ಬೆಚ್ಚಗೆ ಮಲ್ಕೊಂಡೆ. ಹೆ ಹ್ಹೆ!  Sydneyಯಲ್ಲಿ ನೋಡ್ಲಿಕ್ಕೆ ಇನ್ನೂ ತುಂಬಾ places ಇವೆ. Darling harbour, Chinese Friendship Garden, Queen Victoria Building, Zoo, Bondi Beach, Blue mountains ಹೀಗೆ ಇನ್ನೂ ತುಂಬಾ. ನನಗೆ blue mountainsಗೆ ಹೋಗೋಕೆ ತುಂಬಾ ಆಸೆ ಇತ್ತು. ಆದ್ರೆ ಹೋಗೋಕೆ ಆಗ್ಲೆ ಇಲ್ಲ:(. ನಾ ಹೇಳೋದು ಮರೆತಿದ್ದೆ. ನಾ ಇಲ್ಲಿರುವಾಗ ಕೆಲವು Indian Restaurantsಗೆ ಹೋಗಿದ್ದೆ. Darling harbour ಹತ್ತಿರ Manjit's ಅಂತ ಒಂದು restaurant ಇದೆ. ಹಾಗೆ Circular Quay ಹತ್ತಿರ Spice Room ಅಂತ. It was nice. Sydneyಲಿ ಪಾನಿಪುರಿ ತಿಂದ experience amazing. ಹ್ಹ ಹ್ಹ!
Harbour Bridge during Vivid Sydney Celebrations


June 20th ನಂಗೊಂದು surprise ಕಾದಿತ್ತು. ಆದ್ರೆ ನಂಗೆ ಅದು ಗೊತ್ತಿರ್ಲಲ್ಲ. ಹಾಗೆ colleagues ಒಡನೆ Spice Room restaurantಗೆ ಹೋದೆ. ಊಟ ಮಾಡಿ ಇನ್ನೇನು ಹೊರಡೋ time ಅಲ್ಲಿ ನನ್ನ ಒಬ್ಬ colleague Vidhi ಅಂತ ಏನೋ ಮಾತಾಡಿದ್ಲು restaurant staff ಒಡನೆ. ನನಗೆ ಗೊತ್ತೇ ಆಗ್ಲಿಲ್ಲ ಏನೂ ಅಂತ. ಸ್ವಲ್ಪ ಹೊತ್ತಲ್ಲೆ restaurant lights off ಮಾಡಿ ಬೇರೆ lights ಹಾಕಿ, music play ಮಾಡಿದ್ರು Happy Birthday ಅಂತ. ಇಡೀ restaurant ನಲ್ಲಿ ಇರುವವರೆಲ್ಲಾ wish ಮಾಡ್ತಿದ್ರು. Wow! It was so nice.. Superb and Awesome feeling!!! ನನ್ನ 24th year birthday Sydneyಯಲ್ಲಿ ಇಷ್ಟು special  ಆಗಿದ್ದು ಒಂದು ಸುಂದರ ನೆನಪು ನನಗೆ. ನನ್ನ friends Bangalore ಇಂದ gift ಸಹ ಕಳಿಸಿಕೊಟ್ಟಿದ್ರು ನನ್ನ ಒಬ್ಬ colleague ಒಡನೆ. ಎಲ್ರಿಗೂ ಒಂದು special thanks :)

ಇನ್ನು shoppingಗೆ ಅಂತ ಅಲ್ಲಿ ಇಲ್ಲಿ ಸುತ್ತಾಡಿದ್ದಿದೆ. ತುಂಬ ತುಂಬಾ chocolates ತಗೊಂಡಿದ್ದೆ ನನ್ನ ಪರಿಚಯದವರಿಗೆ ಕೊಡ್ಲಿಕ್ಕೆ. Sydneyಯಲ್ಲಿ Italian Pizzas ಸಿಗುತ್ವೆ. Yummy Pizzas!  ಇನ್ನೊಂದು ವಿಷಯ ಗೊತ್ತ ಇಲ್ಲಿ sorry and thanks ಎರಡು ಪದ ಅತಿ ಹೆಚ್ಚಾಗಿ ಬಳಕೆಯಾಗುತ್ವೆ. ಹ್ಹ ಹ್ಹ!

Overall Sydney experience ನನಗೆ ಎಂದೂ ಮರಿಲಿಕ್ಕಾಗದ ಒಂದು ನೆನಪು. ಸಿಹಿ ನೆನಪುಗಳನ್ನ ಸವಿಯುತ್ತಾ ಇಂದು ಇಲ್ಲಿಗೆ ನನ್ನ Sydney times storyಗೆ ಒಂದು full point ಇಡ್ತಿದ್ದೀನಿ. ಆದರೆ ನೆನಪುಗಳಿಗೆ ಎಂದೂ full point ಇಡೋಕೆ ಸಾಧ್ಯನೆ ಇಲ್ಲ ಅನ್ಸುತ್ತೆ. ಅವು ಮತ್ತೆ ಮತ್ತೆ ನಮ್ಮನ್ನ ಕಾಡುತ್ವೆ. ಖುಷಿ, ಸಂತೋಷ, ನಗು, ಅಳು, ಅನುಭವ ಎಲ್ಲವನ್ನೂ ಕೊಟ್ಟು ಮರೆಯಾಗುತ್ವೆ.


Birthday Celebrations :)
ಇಂದು ಮರೆಯಾಗಿರೋ ನೆನಪು  ಮುಂದೆ ಇನ್ನೊಂದು ಕಥೆಯನ್ನ ಹೊತ್ತು ತರುತ್ತೆ. ಕಥೆಯೊಂದಿಗೆ ನಾ ಮತ್ತೆ ಬರುವೆ :)

16 comments:

  1. Tumba Sundaravada anuabava manassige hattira aguvantaha shaili yellai baravanigeyannu madiddira. ede tara experiance post madta eri. oduvavarigu kushi nidutte.

    ReplyDelete
  2. Wow superb👌.....chocolates kodlila😉

    ReplyDelete
  3. Sorry Sydney
    Haha 😂

    Superb experience 👌

    ReplyDelete
  4. Nice to read this Article dear.. :) some of those incidents remind me our Pune days.. Keep up the spirit...

    ReplyDelete
    Replies
    1. Thanks Chai:) I will definitely post an article about our Pune days as well:)

      Delete
    2. Fantastic!!!! I'll b wtng then.. :)

      Delete
  5. Wowwwww!!! I'm sure you had a much more adventurous journey/days in Sydney than the article you wrote. This itself is soo much exciting to read and feel.
    #BondiBeach 😉😎

    ReplyDelete
  6. Yeah:) Bondi beach was also nice. Unfortunately I don't have any pics to share.
    Thanks:)

    ReplyDelete
  7. ಅಬ್ಬಬ್ಬ!!ಎಷ್ಟು ಚೆನ್ನಾಗಿ ಬರೆದಿದ್ದೀಯ ಕಾವ್ಯ.😊 ಅದ್ಭುತವಾಗಿದೆ.ಒಳ್ಳೆಯದಾಗಲಿ ನನ್ನ ಆತ್ಮೀಯ ಗೆಳತಿಗೆ.

    ReplyDelete