ಇವತ್ತಿನ ಈ post ಅಲ್ಲಿ ನಮ್ಮ journey ಕರ್ನಾಟಕ ಇಂದ ಶುರುವಾಗಿ ಕೇರಳದಲ್ಲಿ
end ಆಗೋದು.ನಮ್ಗೆ ಕೇರಳಾಗೆ ಒಮ್ಮೆ ಹೋಗ್ಬೇಕು ಅನ್ನೋ ಆಸೆ ತುಂಬಾ ದಿನದಿಂದ ಇತ್ತು.ಕೊನೆಗೂ ಕಾಲ ಕೂಡಿ ಬಂದೇಬಿಡ್ತು. ನಮ್ಮ ಕೇರಳ
trip plan ready ಆಯ್ತು. It was a two day trip to Kerala. ಆದರೆ ನಮ್ಮ
first destination ಇದ್ದದ್ದು ಕರ್ನಾಟಕದಲ್ಲಿ.
Yes! ಅದೇ ನಮ್ಮ ಕೊಡಗು ಜಿಲ್ಲೆಯ
Haarangi Backwaters!
Haarangi Backwaters |
ನಾವು Friday ರಾತ್ರಿ ಬೆಂಗಳೂರಿಂದ ಹೊರಟದ್ದು. Haarangi Backwaters ಬಗ್ಗೆ ತಿಳಿದಾಗಿಂದ ಇಲ್ಲಿಗೆ ಒಮ್ಮೆ ಬರೋ ಆಸೆ ತುಂಬಾ ಇತ್ತು. ಇಲ್ಲಿ sunset ತುಂಬ ಚೆಂದ ಕಾಣ್ಸುತ್ತೆ. But unfortunately ನಮ್ಮ route map ಬೇರೆ ಇದ್ದಿದ್ದರಿಂದ ನಾವು ಬೆಳಿಗ್ಗೇನೆ ಹೋಗಬೇಕಾಗಿ ಬಂತು. ತುಂಬಾ ಕಡೆ Haarangi Backwaters ಇದೆ ಹೇಳ್ತಾರೆ. But ತುಂಬಾ ಚೆಂದ ಕಾಣ್ಸೋದು Herur ಹತ್ತಿರ ಇರೋ ಈ ಜಾಗದಲ್ಲಿ.
ನಾವು ಮಂಡ್ಯ - ಕುಶಾಲನಗರ
route select ಮಾಡಿದ್ದು. ಈ
road condition ತುಂಬಾ ಚೆನ್ನಾಗಿದೆ. ಸಂಜೆ ಹೊತ್ತಲ್ಲಿ ಮಳೆ ಹನಿತಿರೊ
timeನಲ್ಲಿ ಇಂತ
placesನಲ್ಲಿ ಒಂದು
long drive ಹೋಗೋದ್ರಲ್ಲಿ ಇರೋ ಮಜಾನೆ ಬೇರೆ. Imagine ಮಾಡ್ಕೊಂಡ್ರೆ ಮಸ್ತ್ ಅನ್ಸುತ್ತಲ್ಲ. ಹ ಹ್ಹ ಹ್ಹ!!!
![]() |
On the way to Haarangi Backwaters.... |
ಆದ್ರೆ ನಮ್ಮದು night journey. ನಿದ್ರೆ ಅಂತು ಬರ್ತಿಲಿಲ್ಲ. ರೋಡಲ್ಲಿ ಎಲ್ಲೋ ಒಂದೊಂದು vehicles ಮಾತ್ರ ಕಾಣಿಸ್ತಾ ಇದ್ದದ್ದು. Night drive ಹೋಗೋವಾಗ window open ಮಾಡಿ, ಹೊರಗಡೆ ಬಗ್ಗಿ cool breeze enjoy ಮಾಡ್ತಾ, ಆಕಾಶದಲ್ಲಿರೋ ನಕ್ಷತ್ರ ನೋಡೋದ್ರಲ್ಲಿ ಇರೋ ಮಜಾನೆ ಬೇರೆ. ನಿಮ್ಗೂ try ಮಾಡ್ಲಿಕ್ಕುಂಟಾ??? ಹ ಹ್ಹ ಹ್ಹ!!!
ಸೂರ್ಯ ಇನ್ನೂ ಹುಟ್ಟಿಲ್ಲ, ಬೆಳಕಾಗಿತ್ತು,ತಂಪು ಗಾಳಿ, ಎದುರಿಗೆ ನೀರು, ಅದರ ಹಿಂದೆ ಬೆಟ್ಟ, ಅಲ್ಲಲ್ಲಿ ಹಾರಾಡೋ ಪಕ್ಷಿಗಳು.... ಪ್ರಕೃತಿ ಎಷ್ಟು ಸುಂದರ ಅನ್ಸುತ್ತೆ. We spent an hour or so. Sunrise ಗಿಂತ sunset beautiful ಆಗಿರುತ್ತೆ ಅಂದ್ಕೊಳ್ತೇನೆ. ಒಮ್ಮೆ ಖಂಡಿತ sunset ನೋಡ್ಲಿಕ್ಕೆ ಇಲ್ಲಿಗೆ ಬರ್ಲಿಕ್ಕಿದೆ ನಂಗೆ. Beautiful scenery ನ ಕಣ್ತುಂಬ ನೋಡಿ photos click ಮಾಡಿ ಅಲ್ಲಿಂದ ಹೊರಟದ್ದು ನಮ್ಮ next destination ಆದ ಅಲಕಪುರಿ waterfallsಗೆ. ಇದು ಕರ್ನಾಟಕ-ಕೇರಳ borderನಲ್ಲಿ ಸಿಕ್ಕುತ್ತೆ.
![]() |
We 3:-) |
ಇಲ್ಲಿಗೆ ಹೋಗ್ಲಿಕ್ಕೆ ನಾವು ವಿರಾಜಪೇಟೆ
route ತಗೊಂಡದ್ದು. ಹಸಿವಾಗಿತ್ತು. ಹೊಟ್ಟೆ ಬೇರೆ ತಾಳ ಹಾಕ್ತಿತ್ತು. ಹ ಹ್ಹ!
So, ವಿರಾಜಪೇಟೆನಲ್ಲಿ ತಿಂಡಿ ತಿನ್ನೋಕೆ ಅಂತ ನಿಲ್ಸಿದ್ವಿ. ಇಲ್ಲ ಕೊಂಚ
non-veg restaurants ಜಾಸ್ತಿ. Vegetariansಗೆ ಕೊಂಚ ಕಷ್ಟ. ಹ ಹ್ಹ ಹ್ಹ! ಕೊನೆಗೂ ಒಂದು ಕಡೆ
veg food ಸಿಕ್ತು. ಇಲ್ಲಿ
local dishes ಅಂತ ಬಂದಾಗ ಪತ್ತಲ್, ಅಪ್ಪಮ್ ಎಲ್ಲ ಸಿಕ್ಕುತ್ವೆ. ನಂಗೆ ಪತ್ತಲ್ (ಅಕ್ಕಿ ಪುರಿ ತರಹದ
dish) ಒಂದು ತರಹ ಇಷ್ಟ ಆಯ್ತು.
![]() |
ನಾನು ನನ್ನ Camera :-P |