Friday, 20 January 2017

ಮಳೆಗಾಲದಲ್ಲಿ ಮಲೆನಾಡ ಮುಳ್ಳಯ್ಯನಗಿರಿ…..

ಚಿಕ್ಕಮಗಳೂರು - ಕಾಫಿಯ ನಾಡು, ಮಲೆಗಳ ಮಾಲೆಯಿಂದಲೆ ಕಂಗೊಳಿಸುವ ನಾಡು. ಕಾಫಿ ಹೂವಿನ ಘಮ, ಮಂಜಿನ ಹನಿ, ಆ ಮಳೆ, ಆ ಹಸಿರು ಎಲ್ಲವೂ ಜನರನ್ನ ತಮ್ಮತ್ತ ಕೈಬೀಸಿ ಸೆಳೆಯುತ್ತವೆ. ಇದಕ್ಕೆ ನಾವು ಹೊರತಾಗಿರಲಿಲ್ಲ. ಈ ಬಾರಿ ನಾ ಹೇಳಹುರಟಿರುವ ಕಥೆ, ನನ್ನದಷ್ಟೆ ಅಲ್ಲ ಎಷ್ಟೋ ಜನರ ಕನಸಿನೂರಾದಂತಹ ಮುಳ್ಳಯ್ಯನಗಿರಿಯ ಬಗ್ಗೆ.

ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಅತಿ ಎತ್ತರದ ಶಿಖರ ‘ಮುಳ್ಳಯ್ಯನಗಿರಿ’. ಒಮ್ಮೆ ಮುಳ್ಳಯ್ಯನಗಿರಿಗೆ ಹೊರಟು ದಾರಿ ಸರಿಯಿಲ್ಲದ ಕಾರಣ ಹಿಂದಿರುಗಿ ಬಂದಿದ್ವಿ. ಆ ಆಸೆ ಎಲ್ಲಿ ಮಾಯ ಆಗುತ್ತೆ ಹೇಳಿ, ಮತ್ತೆ ಮತ್ತೆ ಬಾ ಎಂದು ಕೈಬೀಸಿ ಕರೆಯೋ ಈ ಹಸಿರ ನಾಡಿಗೆ ಹೋಗದೆ ಇರಲು ಹೇಗೆ ಸಾಧ್ಯ ಅಲ್ವಾ! 

ನಾವು ಒಟ್ಟು 10 ಜನ ಇದ್ದದ್ದು ನಮ್ಮ ಗುಂಪಲ್ಲಿ. ನಾವು ಹೊರಟದ್ದು ಮಳೆಗಾಲದಲ್ಲಿ. ಮಳೆಗಾಲದಲ್ಲಿ ಮಲೆನಾಡ ನೋಡೋ ಅನುಭವವೇ ಹೊಸತಾಗಿರುತ್ತದೆ. ಈ ಬಾರಿ ಇದು ಕೊಂಚ ಕಷ್ಟ ಸಹ ಅನ್ನಿಸ್ತಾ ಇತ್ತು. ಯಾಕೆ ಅಂದ್ರೆ ಈ ಬಾರಿ ನಾವು ಮುಳ್ಳಯ್ಯನಗಿರಿಗೆ trek ಮಾಡೋಣ ಅಂತ  plan ಮಾಡಿದ್ವಿ. ಮಳೆಯೇ ಬರಲಿ ಮಂಜೇ ಇರಲಿ ನಮ್ಮ ಪಯಣ ಮಾತ್ರ ಶುರುವಾಯ್ತು.
 

ಮುಳ್ಳಯ್ಯನಗಿರಿ checkpost open ಆಗೋದು ಸರಿಯಾಗಿ ಬೆಳಿಗ್ಗೆ 6:00 ಗಂಟೆಗೆ. ದಾರಿಯ ಎರಡೂ ಬದಿಯಲ್ಲಿ coffee estates ನಮ್ಮನ್ನ welcome ಮಾಡುತ್ವೆ ಈ ಮಲೆ(ವಳೆ)ನಾಡಿಗೆ. ಮಂಜು ಮುಸುಕಿರುತ್ತೆ, ಮೋಡ ಕವಿದಿರುತ್ತೆ,ಸೂರ್ಯ ಕಣ್ಣಾಮುಚ್ಚಾಲೆ ಆಟ ಆಡ್ತಿರ್ತಾನೆ ನಮ್ಮೆದುರು ಬರೋಕೆ ಆಗೊಮ್ಮೆ ಈಗೊಮ್ಮೆ ಕಾಣಿಸ್ತಾ.


ಹೋಗ್ತಾ ದಾರೀಲಿ ಒಂದು ಚಿಕ್ಕ ಅಂಗಡಿ ಸಿಕ್ಕುತ್ತೆ. ಬೆಳಗಿನ ತಿಂಡಿ, ಕಾಫಿ, ಟೀ ಇಲ್ಲಿ ಮಾಡಬಹುದು. ಮೇಲೆ ಹೋಗ್ತಾ ಹೋಗ್ತಾ ಸಿಗುವುದೆ ಸೀತಾಳಯ್ಯನಗಿರಿ. ಇಲ್ಲಿಂದ trek ಆದರೂ ಮಾಡಬಹುದು ಅಥವಾ ಮುಳ್ಳಯ್ಯನಗಿರಿ parking place ವರೆಗೂ vehicleನಲ್ಲೆ ಹೋಗಬಹುದು. ನಾವೆಲ್ಲ ಸೀತಾಳಯ್ಯನಗಿರಿಯಲ್ಲೆ vehicle park ಮಾಡಿ trek ಮಾಡೋಣ ಅಂತ decide ಮಾಡಿ ಹೊರಟದ್ದು.


ಪೂರ್ಣವಾಗಿ ಮಂಜು ಕವಿದಿತ್ತು. ಆಗೊಮ್ಮೆ ಈಗೊಮ್ಮೆ ಮಳೆಯೂ ಹನಿತಿತ್ತು. ಮೋಡ ಕವಿದ ವಾತಾವರಣ. ಆಗೊಮ್ಮೆ ಈಗೊಮ್ಮೆ ಸೂರ್ಯನ ದರ್ಶನ. ಹೀಗೆ ಎಲ್ಲವನ್ನ enjoy ಮಾಡ್ತ ನಡೀತಾ ಹೋಗೋವಾಗ ದಾರೀಲಿ group pics ತೆಗೀತಾ, selfiesಗೆ pose ಕೊಡ್ತಾ ಮಜಾ ಮಾಡಿದ್ವಿ. ದಾರೀಲಿ 2 cute couples ಸಿಕ್ಕಿದ್ರು. ಅವರಿಗೆ ರೇಗ್ಸ್ತಾ different poses ಹೇಳಿ ಕೊಡ್ತಾ pics ತೆಗ್ದುಕೊಟ್ರು ನಮ್ಮ friends ಎಲ್ರೂ. ಎಲ್ಲವೂ ಒಂದು ಹೊಸ ಖುಷಿ ಕೊಡ್ತ ಮಜವಾಗಿತ್ತು.
 

ಮಂಜು ಕವಿದಾಗ ಏನೇನು ಕಾಣಿಸೋಲ್ಲ ಇಲ್ಲಿ. ಒಂದು ಕ್ಷಣ ಮಂಜಿನ ಪರದೆ ಸರಿದಾಗ ಕಣ್ಣಿಗೆ ಕಾಣಿಸೋದು ಸುಂದರವಾದ ಹಸಿರು ಹೊದ್ದಿರೋ ಮಲೆನಾಡ ಪರ್ವತಗಳು. ಅಬ್ಬಾ! ಈ ದೃಶ್ಯಗಳನ್ನ phone, camera ನಲ್ಲಿ capture ಮಾಡಿದಾಗ ಸಿಗೊ ಖುಷಿಯೇ ಬೇರೆ. ಇದಕ್ಕಿಂತಲೂ ಹೆಚ್ಚಿನ ಖುಷಿಯಾಗೋದು ನಮ್ಮ ಕಣ್ಣೆಂಬ ಈ camera ನಲ್ಲಿ ಇವೆಲ್ಲಾ ಸುಂದರ ದೃಶ್ಯ capture ಮಾಡಿದಾಗ. ಪ್ರಕೃತಿ ಎಂದಿಗೂ ಅತಿ ಸುಂದರವಾದಂತಹದು. 


ನಡಿತಾ ಹೊರಟು ಮುಳ್ಳಯ್ಯನಗಿರಿ parking placeಗೆ ಬರೋ ಅಷ್ಟರಲ್ಲಿ ತುಂಬಾ ಗಾಳಿ ಶುರುವಾಗಿತ್ತು. In fact ಅತಿಯಾದ ತಂಡಿ ಗಾಳಿಯಿತ್ತು. ಯಾವ ಕ್ಷಣದಲ್ಲಾದರೂ ಮಳೆ ಬರೋ ಹಾಗಿತ್ತು. ಆದರೆ ಮನಸ್ಸಿಗೆ ಏನೋ ಒಂದು ಹುಡುಗಾಟ ಆಡದಹೊರತು ಸಮಾಧಾನ ಎಲ್ಲಿ! ಹ ಹ್ಹ! ಆ ಚಳಿಯಲ್ಲಿ Ice Cream ತಿನ್ನೋ ಆಸೆ! Ice Cream ತಿಂದು ಹೊರಡೋ ಅಷ್ಟರಲ್ಲಿ ಮಳೆ ಶುರುವಾಗೆಬಿಡ್ತು.


ಮೇಲೆ ಅತಿಯಾದ ಕುಳಿರ್ಗಾಳಿ. ಮಳೆ ಹನಿಗಳೂ ಸಹ ಗಾಳಿಯ ರಭಸಕ್ಕೆ ತಮ್ಮ ದಿಕ್ಕನ್ನು ಬದಲಿಸಿದ ಹಾಗಿತ್ತು. ವಾತಾವರಣದಲ್ಲಿ ಇದ್ದಕ್ಕಿದ್ದಹಾಗೆ ತುಂಬಾ ಬದಲಾವಣೆ. ಮೆಟ್ಟಿಲು ಹತ್ತಲಿಕ್ಕೂ ಆಗದಷ್ಟು ಗಾಳಿ, ಮಳೆ. ತುಂಬಾ imbalance ಆಗ್ತಾ ಇತ್ತು. ಎಲ್ಲಿ ಗಾಳಿಯ ರಭಸಕ್ಕೆ ಕೆಳಗೆ ಬೀಳ್ತೀವೋ ಅನ್ನೋ ಅಷ್ಟು imbalance. ನಾವು ಒಬ್ಬರ ಕೈ ಇನ್ನೊಬ್ಬರು ಹಿಡಿದೇ ಮೇಲೆ ಹತ್ತುತ್ತಾ ಹೋದ್ವಿ.

ಗಾಳಿಯ ರಭಸ ಎಷ್ಟಿತ್ತು ಅಂದರೆ ಕಿವಿಯೆಲ್ಲಾ ನೋವು ಬರೋ ಅಷ್ಟು ಜೋರಾಗಿ ಗಾಳಿ ಬೀಸುತಿತ್ತು. ಕಿವಿಯೆಲ್ಲಾ ಬಟ್ಟೆಯಿಂದ cover ಆಗೋ ಹಾಗೆ ಬಟ್ಟೆ ಹೊದ್ದು ಮೆಳೇಲಿ ನೆನೀತಾ ನಾವೆಲ್ಲ ಮೇಲೆ ಹೋದ್ವಿ. ಬೆಟ್ಟದ ಮೇಲೆ ಹೋಗಿ ದೇವರ ದರ್ಶನ ಮಾಡಿದಾಗ ಎಲ್ಲರ ಮನಸ್ಸಲೂ ಏನೋ ಖುಷಿ. ಇನ್ನು ಬರುವಾಗಲೂ ಮಳೆಯೇ.. ಎಲ್ಲೆಲ್ಲೂ ಅತೆಯಾದ ಮಳೆ. ಅಂತೂ ಮಳೆಗಾಲದ ಮುಳ್ಳಯ್ಯನಗಿರಿಯ ನೆನಪು ಎಂದೂ ಚೆಂದ. ಈ ಮಲೆನಾಡಿಗೆ ಮತ್ತೆ ಮತ್ತೆ ಬರೋ ಆಸೆ.
 
ಆ ಆಸೆಯೊಂದಿಗೆ ಈಗ ಈ ಕಥೆನ ಮುಗಿಸ್ತಾ ಇದೀನಿ...