ಈ ಬಾರಿ ನಮ್ಮ ಕನಸಿನೂರು ಮೂಕನಮನೆ ಅಬ್ಬಿ ಜಲಪಾತ ಆಗಿತ್ತು. ಆ ದಾರಿಯ ಪಯಣ ಸುಂದರ ಹಾಗು ರೋಚಕ. ನಾವೆಲ್ಲ ಒಟ್ಟು 10 ಜನ ಇದ್ವಿ. ಎಲ್ರಿಗು ಗಿರಿ, ತೊರೆ,ಹಸಿರು ಅಂದ್ರೆ ಇಷ್ಟ. ನಾವೆಲ್ಲಾ ಒಟ್ಟಾಗಿ ಸಾಗಿದ್ದು ಮೂಕನಮನೆ ಅಬ್ಬಿ ಫ಼ಾಲ್ಸ್ಗೆ.
ಇದು ಅಷ್ಟಾಗಿ ಪರಿಚಿತವಲ್ಲದ ಜಾಗ. ನಾವು ಮಂಜರಬಾದ್ ಕೋಟೆಯಿಂದ ಕ್ಯಾನಹಳ್ಳಿ ಮೇನ್ ರೋಡಲ್ಲಿ ಹೆತ್ತೂರಿನತ್ತ ಹೊರಟು ಅಲ್ಲಿಂದ ಅತ್ತಿಹೊಳೆ ಕಡೆ ಹೋಗ್ತಾ ಯರಗಳ್ಳಿ ರೋಡಲ್ಲಿ ಬಲಕ್ಕೆ 2 Kms ಅಷ್ಟು ದೂರದಲ್ಲಿ ಫ಼ಾಲ್ಸ್ ಇರೋದು. ಹೋಗೋ ದಾರೀಲಿ ಎಲ್ಲೆಲ್ಲೂ ಹಸಿರು,ಆಗಾಗ ತುಂತುರು ಹನಿ ಹನಿತಿತ್ತು. ಆ ಗದ್ದೆ, ಆ ಮಂಜು… ಪ್ರಕೃತಿ ನಿಜಕ್ಕೂ ಸುಂದರ. ಎಲ್ರಿಗು ಪ್ರಕೃತಿ ಮೇಲೆ ಪ್ರೀತಿಯಾಗೋದು ಖಂಡಿತ. ಹಹಹ!!!
ನಾವು ಹೋಗೋ ದಾರೀಲಿ ಒಂದು ಚಿಕ್ಕ ಕೆರೆ ಇತ್ತು. ಅಲ್ಲೆಲ್ಲ ತಾವರೆ ಹೂ ಸಹ ಬಿಟ್ಟಿತ್ತು. ನಾವೆಲ್ಲ ಅಲ್ಲಿ ಇಳ್ದು enjoy ಮಾಡಿದ್ವಿ. ಮಲೆನಾಡ ಜನರ ನೆನಪಿಗೆ ಅಂತ ಈ ಫೋಟೊ!
ಅಲ್ಲಿಂದ ಹೊರಟು ದಾರೀಲಿ ಒಬ್ರ ಬಳಿ ವಿಚಾರಿಸಿದಾಗ ಗೊತ್ತಾದದ್ದು ಯಾವ್ದೆ signboard ಇಲ್ಲ ಹೇಗೋ ದಾರೀಲಿ ಅಂತ. ಒಂದು ಚಿಕ್ಕ bus stop ಬರುತ್ತೆ, ಅಲ್ಲಿಂದ ಪಕ್ಕದಲ್ಲಿ ಇರೊ ಮಣ್ಣಿನ ದಾರೀಲಿ ಹೋದ್ರೆ ಒಂದು ಮನೆ ಸಿಗುತ್ತೆ. ಅಲ್ಲಿಂದ ಏನಿದ್ರು ನಡೆದೇ ಹೋಗಬೇಕು.
ನಾವೆಲ್ಲ ಆ ಕೆಂಪು ಮಣ್ಣಿನ ದಾರೀಲಿ ನಡೀತಾ ಹೊರಟ್ವಿ. ಎಲ್ಲೆಡೆ ಕಾಡು, ಆಗಾಗ ಮಳೆ, ಎಲ್ಲೋ ಜಲಪಾತದ ನೀರು ಧುಮ್ಮಿಕ್ಕೊ ಶಬ್ಧ, ದೂರದಲ್ಲಿ ಬೆಟ್ಟ, ಸುತ್ತಲೂ ಮಂಜು. ಅಬ್ಬ!!! ಒಂಥರ ನಿಜಕ್ಕೂ lucky ನಾವೆಲ್ಲಾ. ಪ್ರತಿ ಕ್ಷಣ enjoy ಮಾಡ್ತ ಹೋದಾಗ ನಾವು ಒಂದು ಚಿಕ್ಕ bridge ಬಳಿ ತಲುಪಿದ್ವಿ. ಇಲ್ಲಿ ನಮಗೆ ಕಾಣೋದು ಬರಿಯ ನದಿಯೇ ಹೊರತು ಫ಼ಾಲ್ಸ್ ಅಲ್ಲ. ಇದೇ ಒಂದು ದೊಡ್ದ difference ಬೇರೆ ಫ಼ಾಲ್ಸ್ ಹಾಗು ಈ ಫ಼ಾಲ್ಸ್ಗೆ.
ಕೆಳಗಿಳ್ದ ತಕ್ಷಣ ನಾವೆಲ್ಲ ಹೋ! ಅಂತ ಕೂಗಿದ್ವಿ. ನಮ್ಗೆಲ್ಲಾ ತುಂಬ ಖುಷಿಯಾಯ್ತು. It was awesome! ಸುತ್ತ ಕಾಡು, ನಡುವಲ್ಲಿ ಜಲಪಾತ! ಅದೊಂತರ Wow!!! ಅನ್ನೊ feel. ಸಾಕನ್ನೊ ಅಷ್ಟು pics, selfies ತೆಗ್ದು ನಂತರ ಫ಼ಾಲ್ಸ್ ಮೇಲಕ್ಕೆ ಹತ್ತೋಕೆ ಶುರು ಮಾಡಿದ್ವಿ.
ಹೀಗೆ ಮೂಕನಮನೆ ಫ಼ಾಲ್ಸ್ ಎಂದೂ ಮರಿಲಿಕ್ಕಾಗದ ಸುಂದರ ನೆನಪು. ಇಂದು ಈ blog ಮೂಲಕ share ಮಾಡ್ತಿದೀನಿ...